Breaking News

ಕೇಂದ್ರ ಸರಕಾರದಿಂದ ಡಿಜಿಟಲ್ ಇಂಡಿಯಾದ ಉಮಂಗ್ (UMANG ) ಅಪ್ಲಿಕೇಶನ್ ಬಿಡುಗಡೆ .....

 

   ಉಮಂಗ್ ಅಪ್ಲಿಕೇಶನ್  ಎಂದರೇನು? ಅದರ ಉದ್ದೇಶ ಮತ್ತು ಬಳಕೆಯ  ವಿಧಾನದ ಬಗ್ಗೆ ನಾವು ಇಂದು ತಿಳಿಯೋಣ ... 

ಭಾರತವನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲು ನರೇಂದ್ರೆ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರಯತ್ನಿಸುತ್ತಿದ್ದು,ಇದಕ್ಕಾಗಿ ಸರಕಾರ ನಗದು ವ್ಯವಹಾರದ ಮೇಲೆ ಅವಲಂಬಿತರಾಗದೆ ಎಲ್ಲರು ಡಿಜಿಟಲ್ ವಹಿವಾಟಿನೆಡೆಗೆ ಬದಲಾಗುವಂತೆ ಕೇಳಿಕೊಳ್ಳುತ್ತಿದೆ.ತಾನೂ ಆನ್ಲೈನ್ ಮೂಲಕ ಪ್ರತಿ ಕಾರ್ಯವನ್ನು ನಿರ್ವಹಿಸುತ್ತಿದೆ. ಅದೇ ರೀತಿಯಾಗಿ ಉಮಂಗ್(UMANG)ಮೋದಿಯವರ ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವ ಒಂದು ಪ್ರಯತ್ನವಾಗಿದೆ. 
ನರೇಂದ್ರ ಮೋದಿಯವರು ಬಿಡುಗಡೆಗೊಳಿಸಿದ ಆಲ್-ಇನ್-ಆನ್ ಅಪ್ಲಿಕೇಶನ್ ನನ್ನು  ಉಮಂಗ್ ಎನ್ನುತ್ತಾರೆ. ಇಲ್ಲಿ ೧೦೦ ಕ್ಕೂ ಹೆಚ್ಚು ಸರಕಾರಿ ಸೇವಾ ಸೌಲಭ್ಯಗಳು ಒಂದೇ ವೇದಿಕೆಯಲ್ಲಿ ಸಿಗುತ್ತವೆ. ಮೋದಿಯವರು ಸೈಬರ್ ಸ್ಪೇಸ್ ನ ಜಾಗತಿಕ ಸಮ್ಮೇಳನದ ಐದನೇ ಆವೃತ್ತಿಯಲ್ಲಿ ಈ ಅಪ್ಲಿಕೇಶನನ್ನು ಬಿಡುಗಡೆಗೊಳಿಸಿದ್ದು ಇದು ಎಂಡ್ರೋಯಿಡ್, ಐಓಎಸ್,ವಿಂಡೋ ಡಿವೈಸ್ ಮತ್ತು ಪಿಚರ್ ಫೋನಿನ ಬಳಕೆದಾರರು ಬಳಸಲು ಯೋಗ್ಯವಾಗಿದೆ.   
ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸಲು ಎಲೆಕ್ರ್ಟೋನಿಕ್ ಅಂಡ್ ಇಂಫಾರ್ಮೇಶನ್ ಟೆಕ್ನಾಲಜಿ (Ministry of Electronic And Information Technology)ಮತ್ತು ರಾಷ್ಟ್ರೀಯ ಇ-ಗವರ್ನನ್ಸ್ ವಿಭಾಗ (NeGD)ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿ ಪಡಿಸಿದ್ದು,ಪಾಸ್ ಪೋರ್ಟ್,ಪ್ಯಾನ್,ಅನಿಲ ಸಿಲಿಂಡರ್,ಪ್ರಾವಿಡೆಂಡ್ ಫಂಡ್ ಖಾತೆ ಮತ್ತು ಆಧಾರ್ ಸಂಬಂಧಿಸಿದ ಸೇವೆಗಳನ್ನು ಪೂರೈಸುವ ಮೂಲಕ ನಾಗರಿಕರಿಗೆ ಆನ್ಲೈನ್ ನಲ್ಲಿ ವ್ಯವಹರಿಸಲು ಅನುವುಮಾಡಿ ಕೊಡುವುದು ಈ ಅಪ್ಲಿಕೇಶನ್ನ ಪ್ರಮುಖ ಗುರಿಯಾಗಿದೆ. 

ಉಮಂಗ್ ಅಪ್ಲಿಕೇಶನ್ ನ ಖಾತೆಯನ್ನು ರಚಿಸುವ ಮತ್ತು ಬಳಸುವ ವಿಧಾನ :- 

- ಅಪ್ಲಿಕೇಶನ್ ಡೌನ್ ಲೋಡ್ ಮಾಡಲು ಪ್ಲೇ ಸ್ಟೋರ್(Play store) ಅಥವಾ ಆಪ್  ಸ್ಟೋರ್(App store) ಗೆ ಹೋಗಿ  ಪಡೆಯಬಹುದು,  ಸಾಧ್ಯವಾಗದಿದ್ದರೆ ೯೭೧೮೩-೯೭೧೮೩ಗೆ ಸಂದೇಶ ಅಥವಾ ಕೆರೆ ಮಾಡುವ ಮೂಲಕ ಪಡೆಯಬಹುದು.
- ನಿಮ್ಮ ಡಿವೈಸ್ ನಲ್ಲಿ ಅಪ್ಲಿಕೇಶನ್ ನ್ನು ಇನ್ಸ್ಟಾಲ್ ಮಾಡಿ .

-ಅಪ್ಲಿಕೇಶನ್ ತೆರೆದು ಹೆಸರು, ವಯಸ್ಸು, ಲಿಂಗ, ಫೋನ್ ನಂ. ಮತ್ತು ಆಧಾರ್ ನಂ.  ನೀಡಿ ಖಾತೆಯನ್ನು ತೆರೆಯಿರಿ.

-ಉಮಂಗ್ ಖಾತೆಯನ್ನು ರಚಿಸಿಯಾದ ನಂತರ ಅಪ್ಲಿಕೇಶನ್ ನ ಸೇವಾ ವಿಭಾಗಕ್ಕೆ ಬನ್ನಿರಿ.

-ನೀವು ಅಪ್ಲಿಕೇಶನ್ ನ ಸೇವಾ ವಿಭಾಗದ್ಲ್ಲಿ ಸಾರ್ಟ, ಫಿಲ್ಟರ್ ಗಳ ಮೂಲಕ ಪಲಿತಾಂಶವನ್ನು ಪಡೆಯಬಹುದಾಗಿದೆ. ಉತ್ತಮ
  ಫಲಿತಾಂಶಕ್ಕಾಗಿ ರಾಜ್ಯಗಳ ಹೆಸರನ್ನು ಸೇರಿಸಬಹುದಾಗಿದೆ.

-ನಿಮ್ಮ ಆಯ್ಕೆಯನ್ನು  ಪಡೆದ ನಂತರ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಸೌಲಭ್ಯ ಪಡೆಯಬಹುದಾಗಿದೆ. 

 ಈ ಮೂಲಕ ಕೇಂದ್ರ ಸರಕಾರ ತನ್ನ ಗುರಿಯನ್ನು ತಲುಪಲು ಈ ಅಪ್ಲಿಕೇಶನ್ ಪರಿಚಯಿಸಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದು ಡಿಜಿಟಲೀಕರಣದೆಡೆಗೆ ಸಾಗಬೇಕೆಂಬುದು ಬಯಸುತ್ತಿದೆ. ಮುಂದಿನ ದಿನಗಳಲ್ಲಿ ಈ ಅಪ್ಲಿಕೇಶನ್ ಇನ್ನೂ ಅಭಿವೃದ್ಧಿ ಪಡಿಸಿ ಹೆಚ್ಚಿನ ಸೇವೆಗಳನ್ನು ಇದರ ಮಿತಿಗೆ ತರುವ ಆಶಯವನ್ನು ಸರಕಾರ ಹೊಂದಿದೆ. 

No comments