Breaking News

ಜಾನುವಾರುಗಳಲ್ಲಿ ಕಾಲು ಬಾಯಿ ರೋಗ

 
              ಕಾಲು ಬಾಯಿ ರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದು ಪಿಕೋರ್ನ್ ವೀರಡೆ (Picornaviridae) ಕುಟುಂಬದ ಅಂಥೋವೈರಸ್ (Aphthovirus) ಎಂಬ ವೈರಸ್ ಗಾಳಿಂದ ಹರಡುತ್ತದೆ. ಈ ರೋಗವು ಜಾನುವಾರುಗಳು, ಹಂದಿ, ಕುರಿ,ಆಡು ಹಾಗೂ ಇತರ ಗೊರಸುಗಳುಳ್ಳ ಮತ್ತು ಮೆಲಕು ಮಾಡುವ ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಸಾಂಕ್ರಾಮಿಕ ರೋಗವಾದ್ದರಿಂದ ಗಾಳಿಯಲ್ಲಿ ವೇಗವಾಗಿ ಹರಡುತ್ತದೆ.
      ಸೋಂಕಿನ ಪ್ರಾಣಿಗಳ ಲಾಲಾರಸ, ಮಲ,ಮೂತ್ರ,ಹಾಲು, ವೀರ್ಯ ಹಾಗೂ ರಕ್ತಗಳಲ್ಲಿ ವೈರಸ್ ಗಳು ಕಂಡುಬರುತ್ತವೆ. ಸೋಂಕಿಗೆ ಒಳಗಾದ ಪ್ರಾಣಿಗಳ ಮೂಲಕ ಕಲುಷಿತಗೊಂಡ ನೀರು,ಆಹಾರ ಮತ್ತು ಸಂಪರ್ಕದ ಮೂಲಕ ಹರಡುತ್ತದೆ.

ರೋಗದ ಲಕ್ಷಣ :-

  •  ತೀವ್ರ ತರವಾದ ಜ್ವರ 
  • ಬಾಯಿಯಿಂದ ಜೊಲ್ಲು ಸುರಿಸುವುದು 
  • ಆಹಾರ ಸೇವಿಸದಿರುವುದು 
  • ಬಾಯಿ,ಗೊರಸು ಮತ್ತು ಕೆಚ್ಚಲುಗಳಲ್ಲಿ ಹುಣ್ಣುಗಳಾಗಿ,ಒಡೆದು ಗಾಯಗಳಾಗುತ್ತವೆ. 
  • ಉಸಿರಾಟದಲ್ಲಿ ತೊಂದರೆ 
  • ತೂಕ ನಷ್ಟವಾಗುವುದು 
ಸರಿಯಾದ ಸಮಯದಲ್ಲಿ ಚಿಕಿತ್ಸೆ ಕೊಡಿಸುವುದರಿಂದ ಜಾನುವಾರುಗಳು ಪರಾಗಬಹುದಾದರೂ ಮುಂದೆ ಬಂಜೆತನ ಮತ್ತು ನಿಶ್ಯಕ್ತವಾಗಿ ಬದುಕುವಂತಾಗುತ್ತವೆ.

ಮುಂಜಾಗ್ರತಾ ಕ್ರಮ :-  

   ರೋಗವನ್ನು ಯಶಸ್ವಿಯಾಗಿ ತಡೆಯಬಲ್ಲ ಲಸಿಕೆಗಳು ಲಭ್ಯವಿದ್ದು,ವರ್ಷಕ್ಕೆ ಎರಡುಬಾರಿಯಂತೆ  ಜನವರಿ ಮತ್ತು  ಜುಲೈತಿಂಗಳಲ್ಲಿ ಕಾಲು ಬಾಯಿ ಜ್ವರದ ಲಸಿಕೆಗಳನ್ನು ಕೊಡಿಸುವುದರಿಂದ ಯಶಸ್ವಿಯಾಗಿ ರೋಗವನ್ನು ತಡೆಗಟ್ಟಬಹುದು. 
   ಈ ರೋಗವು ತುಂಬಾ ವೇಗವಾಗಿ ಹರಡಿ ಆರ್ಥಿಕ ಹಾನಿಯನ್ನುಂಟು ಮಾಡುವುದರಿಂದ ರೋಗ ಬಂದ  ಮೇಲೆ ಚಿಕಿತ್ಸೆ ಕೊಡಿಸುವುದಕ್ಕಿಂತ ಆರು ತಿಂಗಳಿಗೊಮ್ಮೆ ಲಸಿಕೆ ಕೊಡಿಸಿ ಮುಂಜಾಗ್ರತೆ ವಹಿಸುವುದು ಉತ್ತಮ. 

No comments