Breaking News

ಸಾವಯವ ಕ್ರಷಿಯ ಚೈತನ್ಯದ ಸೆಲೆ .... ಈ ಜೀವಾಮೃತ

ಭೂಮಿ ಸಕಲ ಜೀವ ರಾಶಿಗೂ ಆಶ್ರಯ ನೀಡುವ ತಾಯಿ. ಅದರಲ್ಲಿಯೂ ರೈತನಿಗೆ ಜೀವನ ನೀಡುವ ಸೌಭಾಗ್ಯಲಕ್ಷ್ಮಿ. ಆದರೆ ಅಧಿಕ ಪಸಲಿನ ಆಸೆಗೆ ರಾಸಾಯನಿಕ ಗೊಬ್ಬರ ಗಳ ಹಿಂದೆ ಬಿದ್ದ ರೈತ ಸಾವಯವ ಗೊಬ್ಬರ ಗಳನ್ನು ಕಡೆಗಣಿಸಿದ. ಇದರಿಂದ ಭೂಮಿ, ನೀರು, ಸಸ್ಯ ಮತ್ತು ಪ್ರಾಣಿ ಸಂಕುಲಗಳು ತಮ್ಮ ಚೈತನ್ಯ ಕಳೆದುಕೊಳ್ಳುತ್ತಿವೆ.

ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾದ ಭೌತಿಕ,ರಸಾಯನಿಕ ಮತ್ತು ಜೈವಿಕ ಗುಣಧರ್ಮಗಳ ನಾಶವನ್ನು ತಡೆಗಟ್ಟಿ ಅದನ್ನು ಸುಧಾರಿಸುವ ಪ್ರಯತ್ನದೆಡೆಗೆ ನೋಡಿದಾಗ ಕಂಡುಬರುವ ಉತ್ತಮ ಸಾವಯವ ದ್ರವರೂಪಿ ಗೊಬ್ಬರವೆಂದರೆ ಜೀವಾಮೃತ. ಅದೇ ನಮ್ಮ ಜೀವ ಚೈತನ್ಯ.

ಜೀವಾಮೃತವನ್ನು ತಯಾರಿಸುವ ವಿಧಾನ :-

ಬೇಕಾಗುವ ಸಾಮಗ್ರಿಗಳು,
  • 10 ಕೆ. ಜಿ. ಸಗಣಿ.
  • 5 ಲಿ. ಗಂಜಲ.
  • 1 ಕೆ.ಜಿ. ರಸಾಯನಿಕ ಹಾಕದ ಬೆಲ್ಲ.
  • 1 ಕೆ.ಜಿ. ದ್ವಿದಳ ಧಾನ್ಯದ ಹಿಟ್ಟು.
  • ಒಂದು ಹಿಡಿ ಮಣ್ಣು.
  • 200 ಲಿ.ನೀರು.




ಒಂದು ಡ್ರಮ್ ನಲ್ಲಿ  200 ಲಿ.ನೀರನ್ನು ತೆಗೆದುಕೊಂಡು , ಅದಕ್ಕೆ 10 ಕೆ.ಜಿ. ಸಗಣಿ, 5 ಲಿ. ಗಂಜಲ, 1 ಕೆ.ಜಿ ಬೆಲ್ಲ,ಮಣ್ಣು  ಮತ್ತು 1 ಕೆ.ಜಿ. ದ್ವಿದಳ ಧಾನ್ಯದ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರಮಾಡಬೇಕು. ನಂತರ ಒದ್ದೆ ಗೋಣಿಚೀಲವನ್ನು ಮುಚ್ಚಿ ನೆರಳಿನಲ್ಲಿ ಇಡಬೇಕು. ಜೀವಾಮೃತವನ್ನು ಪ್ರತಿದಿನ ಎರಡು ಬಾರಿಯಂತೆ ಮೂರು  ದಿನ ಎಡದಿಂದ ಬಲಕ್ಕೆ ವೃತ್ತಾಕಾರವಾಗಿ ತಿರಿಗಿಸುತ್ತಿರಬೇಕು. ಈ ರೀತಿಯಾಗಿ ಸಿದ್ಧಪಡಿಸಿದ ಜೀವಾಮೃತವನ್ನು 4 ರಿಂದ 8 ದಿನಗಳೊಳಗೆ ಜಮೀನಿಗೆ ಬಳಸಬೇಕು. ಬೆಳಗಿನ ಜಾವ ಅಥವಾ ಸಂಜೆಯ ಸಮಯದಲ್ಲಿ ಬಳಸುವುದು ಹೆಚ್ಚಿನ ಪರಿಣಾಮಕಾರಿ ಎನಿಸಿದೆ.

ಕೃಷಿಯಲ್ಲಿ ಜೈವಿಕ, ಸಾವಯವ ಗೊಬ್ಬರಗಳನ್ನು ಬಳಕೆ ಮಾಡುವ ಮೂಲಕ ಭೂಮಿಯ ಗುಣಧರ್ಮವನ್ನು ಸುದಾರಿಸಿ,ಜೀವ ಸಂಕುಲಕ್ಕೆ ಉತ್ತಮ ಆಹಾರವನ್ನು ಪೂರೈಸುವ ಜವಾಬ್ದಾರಿ ರೈತನಮೇಲಿದೆ. ಹಾಗು ನಮ್ಮ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ ಯನ್ನು ಹಸ್ತಾಂತರಿಸುವುದು ನಮ್ಮ ಕರ್ತವ್ಯ. ಇಂದಿನ ಯುವ ರೈತರು ಈ ದಿಶೆಯಲ್ಲಿ  ಪ್ರಯತ್ನಿಸಿದರೆ ಎಲ್ಲವೂ ಸಾಧ್ಯ.



=======================================================================



ಇಂತಹ ಇನ್ನು ವಿವಿಧ ಕೃಷಿ  ಮಾಹಿತಿಗಾಗಿ ನಮ್ಮ ಸೈಟನ್ನುಮಾಡಿ..


ಪೋಸ್ಟ್ ಹಾಕಿದಾಗ ನೋಟಿಫಿಕೇಶನ್ ಪಡೆಯಲು   Subscribe   ಮಾಡಿ.....




 ದಯವಿಟ್ಟು subscribe  ಮಾಡಿ.  

No comments