Breaking News

5,000 mAh ಬ್ಯಾಟರಿ ಸಾಮರ್ಥ್ಯದ ಫೋನ್ ಕೇವಲ 5,555/-ಕ್ಕೆ

ಮೈಕ್ರೋಮ್ಯಾಕ್ಸ್ ಕಂಪನಿ  :-

ಮೈಕ್ರೋಮ್ಯಾಕ್ಸ್ ಕಂಪನಿ 29 ಮಾರ್ಚ್ 2000 ದಂದು 'ಮೈಕ್ರೋಮ್ಯಾಕ್ಸ್  ಇನ್ಪರ್ಮೇಟಿಕ್ಸ್ ಲಿಮಿಟೆಡ್ ' ಹೆಸರಿನೊಂದಿಗೆ ಸ್ಥಾಪಿಸಲ್ಪಟ್ಟಿತು. ಇದು 2008 ರಿಂದ ತನ್ನ ಉತ್ಪಾದನೆಯ ಮೊಬೈಲ್ ಫೋನುಗಳ ಮಾರಾಟವನ್ನು ಪ್ರಾರಂಭಿಸಿತು. ತನ್ನ ಅಧಿಕ ಬ್ಯಾಟರಿ ಬ್ಯಾಕಪ್ ಸಾಮರ್ಥ್ಯದ ಫೋನ್  ಮೈಕ್ರೊಮೇಕ್ಸ್-X1i ನ್ನು 2014ರಲ್ಲಿ ಬಿಡುಗಡೆ ಮಾಡಿತು.ಆ ಬಳಿಕ  ಮೈಕ್ರೋಮ್ಯಾಕ್ಸ್ ರಷ್ಯಾದಲ್ಲಿ ಜನವರಿ  24, 2014 ರಂದು  ತನ್ನ ಫೋನುಗಳ ಮಾರಾಟವನ್ನು  ಪ್ರಾರಭಿಸಿತು. ಆ  ಮೂಲಕ  ವಿದೇಶದಲ್ಲಿ ವ್ಯಾಪಾರವನ್ನು ಪ್ರಾರಂಭಿಸಿದ ಭಾರತದ ಮೊದಲ ಮೊಬೈಲ್ ಕಂಪನಿಯಾಗಿ ಹೊರಹೊಮ್ಮಿತು. ಪ್ರಸ್ತುತ ಮೈಕ್ರೋಮ್ಯಾಕ್ಸ್ ನ ಪ್ರಧಾನ ಕಛೇರಿ ಹರಿಯಾಣದ ಗುರ್ಗಾಂವನಲ್ಲಿದೆ. 

ಮೈಕ್ರೋಮ್ಯಾಕ್ಸ್ ಭಾರತ್-5

ಮೈಕ್ರೋಮ್ಯಾಕ್ಸ್ ಕಳೆದ ಶುಕ್ರವಾರ  ಭರತ್-5 ಫೋನನ್ನು 'ಪವರ್ ಆಪ್ 5' ಎಂಬ  ಟ್ಯಾಗ್ ಲೈನ್  ನೊಂದಿಗೆ ಬಿಡುಗಡೆ ಮಾಡಿದೆ. ಇದು 1.3GHz ಕೊರ್ಡ್ ಕೋರ್ ಮೀಡಿಯಾ ಟೆಕ್  ಪ್ರೊಸೆಸರ್ ನೊಂದಿಗೆ, ಆಂಡ್ರಾಯ್ಡ್ 7.0 ನ್ಯಾಗ ದಲ್ಲಿ ಕಾರ್ಯ ವಿರ್ವಹಿಸಲಿದೆ.  ಈ ಫೋನ್ 5.2 ಇಂಚ ಎಚ್.ಡಿ.[ 1280 X 720 Pixel Resolution] ಡಿಸ್ಪ್ಲೇ ಮತ್ತು  5,000 mAh ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಿದೆ.


ಭಾರತ್-5 ಫೋನ್  5 MP ಹಿಂದಿನ  ಹಾಗು 5 MPಸೆಲ್ಫಿ ಕೆಮರಾವನ್ನು ಹೊಂದಿದೆ. ಇದು 1GB RAM, 16 GB ಆಂತರಿಕ ಮೆಮೊರಿ ಹಾಗು 64 GB ವರೆಗೆ ವಿಸ್ತರಿಸ ಬಹುದಾದ ಮೈಕ್ರೋ ಎಸ್ ಡಿ ಮೆಮೊರಿ ಸಾಮರ್ಥ್ಯವನ್ನು ಹೊಂದಿದೆ.
ಕೇವಲ 5,555/-ಕ್ಕೆ  4 G  Vol TE  ಸಪೋರ್ಟೆಬಲ್ ಫೋನನ್ನು ಮೈಕ್ರೋಮ್ಯಾಕ್ಸ್ ಮಾರುಕಟ್ಟೆಗೆ ಬಿಟ್ಟಿದ್ದು, ಉತ್ತಮ ಪ್ರೊಸೆಸರ್ ಹಾಗು ಬ್ಯಾಟರಿಯನ್ನು ಹೊಂದಿದೆ.


ಕಡಿಮೆ ಬೆಲೆಗೆ 4 G ಪೊನ್ಫ್ ಕೊಳ್ಳಲು ಬಯಸುವವರಿಗೆ ಒಂದು ಉತ್ತಮ ಆಯ್ಕೆಯಾಗಿದ್ದು, ವೊಡಾಫೋನ್ ನ 5 ತಿಂಗಳ 50 GB ಅಪಾರ್ ಕೂಡ ಲಭಿಸಲಿದೆ.


No comments